¡Sorpréndeme!

ಮೋದಿ ವಿಷಯಕ್ಕೆ ಪ್ರಕಾಶ್ ರೈ ಹಾಗು ಜಗ್ಗೇಶ್ ನಡುವೆ ಟ್ವಿಟ್ಟರ್ ವಾರ್ | Oneindia Kannada

2018-02-19 208 Dailymotion

ನಟ ಕಮ್ ರಾಜಕಾರಣಿ ಜಗ್ಗೇಶ್ ಹಾಗೂ ನಟ ಪ್ರಕಾಶ್ ರೈ ನಡುವೆ ಸ್ವಾರಸ್ಯಕರ ಪ್ರಶ್ನೋತ್ತರ ಸರಣಿ ನಡೆದಿದೆ. ಎಂದಿನಂತೆ ಪ್ರಕಾಶ್ ರೈ ಅವರು ತಮ್ಮ justasking ಹ್ಯಾಶ್ ಟ್ಯಾಗ್ ಸರಣಿಯಲ್ಲಿ ಪ್ರಧಾನಿ ಮೋದಿ ಅವರ ಅರ್ಹತೆ ಬಗ್ಗೆ ಪ್ರಶ್ನಿಸಿದ್ದಾರೆ. ಮೋದಿಗೆ ರಾಜ್ಯಭಾರ ಮಾಡಲು ಅರ್ಹತೆ ಇದೆಯೇ? ಎಂದು ಪ್ರಶ್ನಿಸಿದ್ದ ರೈ ಅವರ ವಿರುದ್ಧ ಜಗ್ಗೇಶ್ ತಿರುಗಿ ಬಿದ್ದಿದ್ದು, ತಮ್ಮ ಟಿಪಿಕಲ್ ಭಾಷೆ ಪ್ರಯೋಗಿಸಿ, ಉತ್ತರಿಸಿದ್ದಾರೆ. ತಾವು ಹಾಗೂ ಪ್ರಕಾಶ್ ರೈ ಚಿತ್ರರಂಗಕ್ಕೆ ಕಾಲಿಟ್ಟ ದಿನಗಳನ್ನು ಸ್ಮರಿಸಿದ್ದಾರೆ. ಅದರೆ, ಮೋದಿ ಅವರನ್ನು ಪ್ರಶ್ನಿಸುವ ಮೊದಲು ನಿಮ್ಮ ಅರ್ಹತೆ ಬಗ್ಗೆ ಹೇಳಿ ಎಂದು ಕೇಳಿದ್ದಾರೆ.